ಪುಂಡ್ರರು
ಈಶಾನ್ಯ ಬಂಗಾಳ ಮತ್ತು ಬಿಹಾರಗಳಲ್ಲಿ ಪುರಾಣ ಕಾಲದಲ್ಲಿದ್ದ ಪುಂಡ್ರ ಎಂಬ ಪ್ರದೇಶದ ಮೂಲ ವಾಸಿಗಳು. ವೇದಗಳಲ್ಲಿ ಇವರನ್ನು ದಸ್ಯುಗಳೆನ್ನಲಾಗಿದೆ. ಐತರೇಯ ಬ್ರಾಹ್ಮಣದ ಪ್ರಕಾರ ಇವರು ವಿಶ್ವಾಮಿತ್ರ ವಂಶದ ಅಂತ್ಯಜರು. ನಾಯಿಯ ಮಾಂಸವನ್ನು ತಿನ್ನುವವರೆಂದು ಇವರನ್ನು ಬಣ್ಣಿಸಲಾಗಿದೆ. ಪಾಂಡವರ ಕಾಲದಲ್ಲಿ ಪುಂಡ್ರ ದೇಶಾಧಿಪತಿಯಾಗಿದ್ದ ಪೌಂಡ್ರಕ ವಾಸುದೇವನೆಂಬಾತ ಕೃಷನ ಮೇಲೆ ಯುದ್ಧ ಮಾಡಿ ಸತ್ತನೆಂದು ಪ್ರತೀತಿ.								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ